ಡ್ರಗ್ ಆಕ್ಷನ್ ಫೋರಂ - ಕರ್ನಾಟಕ
|
|
---------------------------------------------------------------------------------------------
ಪತ್ರಿಕಾ ಪ್ರಕಟಣೆ
ಡ್ರಗ್ ಆಕ್ಷನ್ ಫೋರಂ - ಕರ್ನಾಟಕವು (ಡಿಎಎಫ್-ಕೆ, Drug Action Forum – Karnataka, DAF-K) ತರ್ಕಬದ್ಧ ಔಷಧ ಬಳಕೆಗಾಗಿ ಒಂದು ಸ್ವತಂತ್ರ ನೋಂದಾಯಿತ
ಸರ್ಕಾರೇತರ ಸಂಸ್ಥೆ.
ಈ ಜಾಥಾವನ್ನು ನಡೆಸುವ ನಿರ್ಧಾರವು ಕೆಎಸ್ಎಂಎಸ್ಸಿಎಲ್ (ಕರ್ನಾಟಕ ರಾಜ್ಯ
ವೈದ್ಯಕೀಯ ಸೇವಾ ನಿಗಮ ನಿಯಮಿತ - KSMSCL, Karnataka State Medical Supplies Commission
Limited - https://www.ksmscl.in/) ಅನ್ನು ಜನಪರ
ಸಂಸ್ಥೆಯನ್ನಾಗಿ ಮಾಡಲು ಮತ್ತು ಅದರ ಕೆಲಸದಲ್ಲಿ ಪಾರದರ್ಶಕತೆಯನ್ನು ತರಲು ಕಳೆದ ಹದಿನೈದು
ವರ್ಷಗಳಿಂದ ಡಿಎಎಫ್-ಕೆ ಪ್ರಯತ್ನಗಳ
ಪರಾಕಾಷ್ಠೆಯಾಗಿದೆ. ರಾಜ್ಯ ಸರ್ಕಾರಕ್ಕೆ ಹಲವು ವರ್ಷಗಳ ಕಾಲ ಮನವಿ ಮಾಡಿದ ನಂತರ, ಬಳ್ಳಾರಿಯಲ್ಲಿ ಪ್ರಾರಂಭವಾದ ಮತ್ತು ಕರ್ನಾಟಕದ ಇತರ
ಜಿಲ್ಲೆಗಳಿಗೂ ಹರಡಿದ ತಾಯಂದಿರ ಸಾವಿನ ಸರಣಿಯಿಂದಾಗಿ ಡಿಎಎಫ್-ಕೆ (DAF-K) ಆಘಾತ ಮತ್ತು ನೋವನ್ನು ಪದಗಳಲ್ಲಿ ಹೇಳಲಾಗದಷ್ಟು ಆಗಿದೆ.
ಮೊದಲೆಯನದಾಗಿ KSMSCL ಸಂಸ್ಥೆ ಮೂಲಕ
ಔಷಧಿಗಳನ್ನು ಉಚಿತವಾಗಿ ನೀಡುವಲ್ಲಿ ಇಲ್ಲಿಯವರೆಗೆ ಕರ್ನಾಟಕ ರಾಜ್ಯ ವಿಫಲವಾಗಿದೆ. ಸರ್ಕಾರಿ
ಆಸ್ಪತ್ರೆಗಳ ಬಳಿ ಅಣಬೆಯಂತೆ ಬೆಳೆದಿರುವ ಖಾಸಗಿ ಫಾರ್ಮಸಿಗಳ ಸಂಖ್ಯೆಯೇ ಇದಕ್ಕೆ ಪುರಾವೆಯಾಗಿದೆ.
ಅಷ್ಟೇ ಸಾಲದು ಎಂಬಂತೆ ಆಸ್ಪತ್ರೆಯ ಆವರಣದಲ್ಲಿರುವ ಜೆನೆರಿಕ್ ಮಳಿಗೆಗಳ ಮೂಲಕ ಔಷಧಿಗಳನ್ನು
ಮಾರಾಟ! ತನ್ನದೇ ನೀತಿಗೆ ತಾನೇ ವಿರುದ್ಧವಾಗಿ ನಡೆದುಕೊಳ್ಳುವದು! ಘೋಷಣೆಯಲ್ಲಿ "ಉಚಿತ
ಔಷಧಿಗಳನ್ನು ಪೂರೈಸುತ್ತೇನೆ" ಎಂದು ಭರವಸೆ ನೀಡುತ್ತ ಅವುಗಳನ್ನು ಮಾರಾಟ ಮಾಡುತ್ತದೆ !!
ಎರಡನೆಯದಾಗಿ ರಕ್ತನಾಳದೊಳಕ್ಕೆ
ಕೊಡುವ ಔಷಧವನ್ನು ಬಂಗಾಳದ ಪಶ್ಚಿಮ್ ಬಂಗಾ ಫಾರ್ಮಾಸ್ಯೂಟಿಕಲ್ ಲಿಮಿಟೆಡ್ ಕಂಪನಿಯು ಬಳ್ಳಾರಿ
ಜಿಲ್ಲಾಸ್ಪತ್ರೆಗೆ ಸರಬರಾಜು ಮಾಡಿತ್ತು. ಈ ಔಷಧವು ಗುಣಮಟ್ಟದಿಂದ ಕೂಡಿರಲಿಲ್ಲವೆಂಬ ಕಾರಣಕ್ಕೆ ಆ
ಕಂಪನಿಯಿಂದ ಔಷಧಗಳು ಬೇಡವೆಂದು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇಂಥ ನಿರ್ಧಾರಕ್ಕೆ ಬರುವ
ಮೊದಲು ಕಂಪನಿಗೆ ನೋಟಿಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಕಂಪನಿಯು
ಕೋರ್ಟ್ ಮೆಟ್ಟಿಲೇರಿತು. ಔಷಧ ಗುಣಮಟ್ಟದ್ದಾಗಿರಲಿಲ್ಲ ಎಂಬ ವಿಷಯ ಪಕ್ಕಕ್ಕೆ ಸರಿದು, ಔಷಧ ಖರೀದಿ ಸ್ಥಗಿತಗೊಳಿಸುವುದಕ್ಕೆ ಮುನ್ನ ಕಂಪನಿಗೆ ನೋಟಿಸ್ ಕೊಟ್ಟಿರಲಿಲ್ಲ ಎಂಬುದೇ
ಮುಖ್ಯ ವಿಷಯವಾಯಿತು. ಕೋರ್ಟ್ ಮೆಟ್ಟಿಲೇರಿ, ಗೆದ್ದು, ಮತ್ತೆ ಔಷಧ ಸರಬರಾಜು ಮಾಡುವುದನ್ನು ಕಂಪನಿಯು ಮುಂದುವರಿಸಿತು. ಸರ್ಕಾರ ಆಗಲೇ
ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಆ ಕೆಲಸ ಆಗದ್ದರಿಂದ ಕಳಪೆ ಔಷಧಗಳು ಹಲವು ತಾಯಂದಿರ ಜೀವ
ತೆಗೆದುಕೊಂಡವು.
ಕಳಪೆ ಔಷಧ ಸರಬರಾಜು ಮಾಡಿದ್ದು ನಿಜವೇ ಆಗಿದ್ದರೆ ನಮ್ಮ KSMSCL ನಿಗಮವು ಆ ಕಂಪನಿಗೆ
ಕ್ರಮದ ಪ್ರಕಾರ ನೋಟಿಸ್ ಕೊಟ್ಟು ಔಷಧಗಳನ್ನು ಹಿಂದಕ್ಕೆ ಕಳಿಸಬೇಕಾಗಿತ್ತಲ್ಲವೇ? ಹಾಗೆ ಮಾಡಲಿಲ್ಲವೇಕೆ? ನಂತರವಾದರೂ ನೋಟಿಸ್ ಕೊಡಬೇಕಾಗಿತ್ತಲ್ಲವೇ? ಕಳಪೆಯೆಂದು ಗೊತ್ತಿದ್ದು ಕೂಡ ಅದೇ ಔಷಧಗಳನ್ನು ಖರೀದಿಸಿ ಬಾಣಂತಿಯರಿಗೆ ಕುಡಿಸಿದ KSMSCL KSMSCL ನಿಗಮವು ಬಾಣಂತಿಯರ
ಸಾವಿಗೆ ಹೊಣೆಗಾರನಲ್ಲವೇ?
ತಾಯಂದಿರ ಸಾವಿಗೆ ನ್ಯಾಯ ಕೊಡಿಸಬೇಕೆಂದರೆ ಮುಖ್ಯಮಂತ್ರಿಯವರು ಈಗಲಾದರೂ KSMSCL ನಿಗಮವನ್ನು ಹೊಣೆಯಾಗಿಸಬೇಕು. ಅಷ್ಟೇಅಲ್ಲ, ತಮಿಳುನಾಡಿನ ವೈದ್ಯಕೀಯ ಸೇವಾ ನಿಗಮದ ಮಾದರಿಯಲ್ಲಿ ಕೆಲಸ ಮಾಡಬೇಕೆಂದು ಬಾಯಿಮಾತಿನಲ್ಲಿ
ಹೇಳಿದರೆ ಏನೂ ಪ್ರಯೋಜನವಿಲ್ಲ. ತಮ್ಮ ಮಾತಿಗೆ ಅರ್ಥ ಬರಬೇಕೆಂದರೆ, ಔಷಧ ಸರಬರಾಜು ಮಾಡುವ KSMSCL ನಲ್ಲಿ ಯಾವುದೇ
ರಾಜಕೀಯ ಹಸ್ತಕ್ಷೇಪ ಇಲ್ಲದಂತೆ, ಅಧಿಕಾರಿಗಳು ತಲೆಹಾಕದಂತೆ ಅದನ್ನು ಸ್ವತಂತ್ರ
ಸಂಸ್ಥೆಯನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಕೂಡ ಮುಖ್ಯಮಂತ್ರಿಯವರ ಮೇಲಿದೆ. ತಪ್ಪು ಮಾಡಿದವರನ್ನು
ಹಾಗೆಯೇ ಹೋಗಗೊಟ್ಟರೆ ಇನ್ನಷ್ಟು ತಾಯಂದಿರ ಸಾವುಗಳನ್ನು ನೋಡಬೇಕಾದೀತು. ಹಾಗಾಗದಂತೆ ತಡೆಯುವ
ಹೊಣೆಗಾರಿಕೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರ ಮೇಲಿದೆ.
ಆರೋಗ್ಯ ಹಕ್ಕು ಕಾಯ್ದೆ ರಾಜಸ್ಥಾನದ ಆರೋಗ್ಯ ಹಕ್ಕು ಮಸೂದೆಯು ರಾಜ್ಯದ ಜನರಿಗೆ ಸರಿಯಾದ
ಹಕ್ಕನ್ನು ಒದಗಿಸುತ್ತದೆ. ಇದು ರಾಜ್ಯದ ನಿವಾಸಿಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ
ಸೇವೆಗಳನ್ನು ಒಳಗೊಂಡಿದೆ. ಈ ಮಸೂದೆಯು ಆರೋಗ್ಯದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಮತ್ತು
ಸಾರ್ವಜನಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಕೆಲವು ಬಾಧ್ಯತೆಗಳನ್ನು
ನಿಗದಿಪಡಿಸುತ್ತದೆ. ಆರೋಗ್ಯದ ಹಕ್ಕು: ರಾಜಸ್ಥಾನ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ
ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳಿವೆ.
ಇವುಗಳಲ್ಲಿ ಈ ಕೆಳಗಿನವುಗಳು ಸೇರಿವೆ: (i) ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಉಚಿತ
ಹೊರ ರೋಗಿ ಮತ್ತು ಒಳಾಂಗಣ ಒಳರೋಗಿ ಚಿಕಿತ್ಸೆ ರೋಗಿ ವಿಭಾಗ ಸೇವೆಗಳು, ಮತ್ತು
ಔಷಧಿಗಳುನ್ನು ಪಡೆಯುವುದು, (ii) ಪೂರ್ವಪಾವತಿ ಅಥವಾ ಪೊಲೀಸ್ ಅನುಮತಿಗಾಗಿ ಕಾಯದೆ ಎಲ್ಲಾ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ
ತುರ್ತು ಚಿಕಿತ್ಸೆ ಮತ್ತು ಆರೈಕೆ, (iii) ಅನಾರೋಗ್ಯ ಮತ್ತು
ಕಾರಣ,
ಫಲಿತಾಂಶಗಳು, ತೊಡಕುಗಳು ಮತ್ತು
ಚಿಕಿತ್ಸೆಯ ವೆಚ್ಚದ ಬಗ್ಗೆ ಮಾಹಿತಿಯನ್ನು ಪಡೆಯುವುದು,
ಮತ್ತು ಸಂಬಂಧಿತ ದಾಖಲೆಗಳನ್ನು ಕೇಳುವುದು, (iv) ನಿರ್ದಿಷ್ಟ ಪರೀಕ್ಷೆಗಳು ಅಥವಾ ಚಿಕಿತ್ಸೆಗಳಿಗೆ ಮುಂಚಿತವಾಗಿ ಮಾಹಿತಿಯುತ ಪಡೆಯುವದು, (v) ಎಲ್ಲಾ ಆರೋಗ್ಯ
ಆರೈಕೆ ಸಂಸ್ಥೆಗಳಲ್ಲಿನ ಚಿಕಿತ್ಸೆಗಳಲ್ಲಿ ಗೌಪ್ಯತೆ, (vi) ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ, ಮತ್ತು (vii) ಕುಂದುಕೊರತೆ
ಪರಿಹಾರ. ನಮ್ಮ ರಾಜ್ಯಕ್ಕೂ ಇಂತಹ ಆರೋಗ್ಯ ಹಕ್ಕು ಕಾಯ್ದೆಯನ್ನು ತರಬೇಕೆಂದು
ನಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ.
|
No comments:
Post a Comment